Wednesday, November 5, 2008

ಟ್ಯೂಬ್ಲೈಟ ಹೊತ್ತಿಕೊಂಡಿತ್ತು...

ನಿಮಗ್ಗೊತ್ತಾ?
ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ೪ ವರ್ಷಗಳ ವರೆಗೂ ಭ್ರಮರಿಯ ಕಲ್ಪನೆ ನನ್ನ ಕನಸಿಗೂ ಬಂದಿರಲಿಲ್ಲ. ಅದು ನನ್ನ ಪಿ.ಜಿ. ವಿದ್ಯಾಭ್ಯಾಸದ ಕೊನೆಯ ದಿನಗಳು. ಸುಮ್ಮನೆ ಅದೇನೋ ಒಳಗೊಳಗೇ ಕೊರಗು. ನನ್ನಿಂದ ಹೊಸ ಆಲೋಚನೆಗಳು ಬರಲೇ ಇಲ್ವೇ ? !
ಅದೊಂದು ದಿನ ರಾಮು ೬ ತಿಂಗಳ ನಂತರ ಮೊದಲ ಬಾರಿಗೆ ಫೋನಾಯಿಸಿದ್ದ. ಗಂಟೆಗಳ ಕಾಲ ಮುಂದುವರೆದಿತ್ತು ನಮ್ಮ ಸುಧೀರ್ಘ ಮಾತುಕತೆ. ಯಾವ ಕ್ಷಣದಲ್ಲಿ ನನ್ನ ಟ್ಯೂಬ್ಲೈಟ ಹೊತ್ತಿಕೊಂಡಿತೋ ಗೊತ್ತಿಲ್ಲ, ಆ ವರೆಗೆ ನನ್ನ ಒಳಗೆ ಹೊಯ್ದಾಡುತ್ತಿದ್ದ ಯಾವುದೋ ಕರೆಗೆ ( ಫೋನಿಂದಲ್ಲ !) ಸರಿಯಾಗಿ ಸ್ಪಂದಿಸಿಲ್ಲ ಎಂದು ಕೊರಗುತ್ತಿದ್ದ ನಾನು ಜಿಗ್ಗನೆ ಎದ್ದು ಕುಳಿತಿದ್ದೆ. ಅವನ ಬಳಿಯೇ ನಾನು ಮೊದಲು ನಾನಾ ಯೋಚನೆಯನ್ನು ಬಿಚ್ಚಿಟ್ಟದ್ದು. ಆದರೆ ಚೈತ್ರರಶ್ಮಿಯ ಒಳಗಿನ ತುಡಿತಗಳ ಅರಿವಿದ್ದ ಅವನಿಗೆ ಕಂಡ ನನ್ನ ಆ ತಿಣುಕಾಡುತ್ತಿದ್ದ ಕನವರಿಕೆಗಳು ಅಷ್ಟು ಸುಲಭವಾಗಿ ಉಳಿದವರಿಗೆ ಕಂಡಿರಲಿಲ್ಲ. ಆದರೆ ಮನಸ್ಸು ನಿರ್ಧಾರ ಮಾಡಿಯಾಗಿತ್ತು. ಹಾಗಾಗಿ ನಾನು ನನ್ನ ಪತ್ರಿಕೆ ಪ್ರಾರಂಭಿಸುವ ಐಡಿಯಾ ಯಾರ ಬಳಿ ಹೇಳಿದರೂ ಅದು ಹಾಸ್ಯಾಸ್ಪದ ! ಬಹುಷಃ ಪ್ರತಿ ಪತ್ರಿಕೆಗಳು ಹುಟ್ಟುವ ಮೊದಲು ಈ ಗುಂಗು, ಹೇಳುವ ಹಿತೈಷಿಗಳ (?) ಮಾತನ್ನು ನುಂಗುವುದು ಇರುತ್ತದೇನೋ !

1 comment:

ರಾಧಿಕಾ ವಿಟ್ಲ said...

ಹೇ ಮನು...

...ನಿನ್ನ ಈ ಮೊದಲ ಗೆಜ್ಜೆ ನಾದ ಇಂಪಾಗಿದೆ. ಗೆಜ್ಜೆ ಫೋಟೋ ಅಂತೂ ಸೂಪರ್ಬ್‌. ಡೋಂಟ್‌ ವರಿ ಗೆಳತೀ.. ನಿನ್ನ ಟ್ಯೂಬ್‌ಲೈಟ್‌ ಬೆಳಕಿನಲ್ಲಿ ಅಕ್ಷರಕಾಯಕಕ್ಕೆ ಕಣ್ಣಾಡಿಸಲು ನಾನಂತೂ ಇದ್ದೀನಿ.
- ರಾಧಿಕಾ